Friday, 15 March 2013

ಹಾರಿ ಬಿಡುವೆ ಹಕ್ಕಿಯಂತೆ

ಹಾರಿ ಬಿಡುವೆ ಹಕ್ಕಿಯಂತೆ ಮನಸ್ಸ ಬಾನಲ್ಲಿಯೂ
ಇಷ್ಟವಾದ ನಕ್ಷತ್ರವ ಕದ್ದು ನೋಡಲು ಎಲ್ಲೆಲ್ಲಿಯೂ
ಯಾವ ಹಳ್ಳಿದಾದರೇನು ನಕ್ಷತ್ರ ಮನಸ್ಸು ಚಿನ್ನದಂತಿದ್ದರೆ ಸಾಕು
ಯಾವ ರೂಪದಾದರೇನು ನಕ್ಷತ್ರ ಗುಣ ಅಪರಂಜಿಯಂತಿದ್ದರೆ ಸಾಕು ||ಪಲ್ಲವಿ||

ಸಾವಿರಾರು ಪುಟದಲ್ಲಿಯೂ ನಿನ್ನದೆ ಹೆಸರು ಪ್ರತಿ ಪುಟ ಪುಟದಲ್ಲಿಯೂ
ನೂರಾರು ಬಾಳಿನ ಹೆಜ್ಜೆಯ ಗುರುತ್ತಲ್ಲಿಯೂ ನಿನ್ನದೆ ಪ್ರತಿ ನೆನಪು ಪ್ರತಿ ಹೆಜ್ಜೆಯಲ್ಲಿಯೂ
ಕಾಣದೆಯಿರುವ ಕಣ್ಣಿಗೆ, ಮನದ ಕಣ್ಣಿಗೆ ಕಾಣುವ ಚಲುವೆಯ ಹುಡುಕುತ ನಾ ಹೋರಟೆ
ಬಾವನೆಯ ಬರವಸೆಯ ಸಾಗರವ ಹೊತ್ತು ಕನಸ್ಸಿನ ಮನಸ್ಸಿನ ದೇವತೆಯ ಹುಡುಕುತ ನಾ ಹೋರಟೆ.

ಓ ಜೀವವೆ ನೀ ಎಲ್ಲಿ ಅಡಗಿರುವೆ ನನ್ನ ಈ ಲೋಕದಲ್ಲಿ ಒಂಟಿಯಾಗಿ ಬಿಟ್ಟು
ಪ್ರತಿ ಕ್ಷಣದಲ್ಲಿಯು ಕಾಯುವೆ ನಿನ್ನ ಪ್ರೀತಿಗಾಗಿ ಈ ಲೋಕದಲ್ಲಿ ನಾ ಎಲ್ಲಾ ಬಿಟ್ಟು
ಒಂದೊಂದು ಸಲ ಒಂದೊಂದು ಕಲ್ಪನೆ ಹೊತ್ತು ಹಗಳಿರುಳು ಕಾಯುತ್ತಿರುವೆ ನಿನ್ನ ಜೋತೆಗೆ ನಾ ಸೇರಲು
ಯಾರಿಗೂ ಹೇಳದೆ ಕೇಳದೆ ಸುರುವಾಗಿದೆ ಈ ಪ್ರೀತಿ ನಿನ್ನ ಪ್ರೀತಿಯ ಪಡೆದು ನಿನ್ನ ಜೋತೆಗೆ ನಾ ಸೇರಲು.

                                                                                         -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

1 comment:

  1. ಹಾರಿ ಬಿಡುವೆ ಹಕ್ಕಿಯಂತೆ ಕವನವು ಮನಸ್ಸಿನ ಬಾವನೆಗಳ ಎಳೆ ಎಳೆಯಾಗಿ ಆಕಾಶದಲ್ಲಿರುವ ನಕ್ಷತ್ರದ ಜೋತೆಗಿನ ಹೋಲಿಕೆಯೊಂದಿಗೆ ಸೋಗಸಾಗಿ ಮೂಡಿಬಂದಿದೆ.

    ReplyDelete