ನನ್ನ ಪ್ರೀತಿಯ ಹೃದಯ
ನನ್ನ ಪ್ರೀತಿಯ ಹೃದಯ ಹೂವಾಗಿ ಅರಳಲಿ
ನಗುವ ಹೂವಿನಂತೆ
ನನ್ನ ಪ್ರೀತಿಯ ಹೃದಯವು ಅಳುವ ಹೃದಯಗಳಿಗೆ
ಆಸರೆಯ ಮನೆಯಾಗಲಿ
ನನ್ನ ಪ್ರೀತಿಯ ಹೃದಯ ಪ್ರೀತಿ ಪ್ರೀತಿಯಿಂದಿರಲಿ
ದ್ವೇಷದಿಂದಲ್ಲ
ನನ್ನ ಪ್ರೀತಿಯ ಹೃದಯದ ಕನಸ್ಸು ನನಸ್ಸಾಗಿ ಇಡೇರಲಿ
ದುರಾಷೆಯಿಂದೆಲ್ಲ
ನನ್ನ ಪ್ರೀತಿಯ ಹೃದಯ ಮನೆಯ ಕಟ್ಟಿ ಬೆಳಸಲಿ
ಮನದ ಮನಸ್ಸಿನಿಂದ
ನನ್ನ ಪ್ರೀತಿಯ ಹೃದಯ ಒಡೆದ ಹೃದಯಗಳ ಒಂದು ಮಾಡಲಿ
ಹೃದಯ ಹೃದಯದಿಂದ
ನನ್ನ ಪ್ರೀತಿಯ ಹೃದಯ ಬಂಗಾರದ ಬದುಕ ಸಾಗಿಸಲಿ
ಹೃದಯ ಹೃದಯಗಳ ನಡುವೆ
ನನ್ನ ಪ್ರೀತಿಯ ಹೃದಯ ಹೂವಾಗಿ ಅರಳಲಿ
ಅರಳಿ ಅರಳಿಸಲಿ ಹೃದಯ ಹೃದಯಗಳ ನಡುವೆ
ಹೆಚ್. ವಿರುಪಾಕ್ಷಪ್ಪ ತಾವರಗೊಂದಿ.
ನನ್ನ ಪ್ರೀತಿಯ ಹೃದಯ ಎಂಬ ಕವನವು ನನ್ನ ಜೀವ ಹೃದಯದ ಬಗ್ಗೆ ಹೃದಯವಂತಿಕೆ ಬಗ್ಗೆ ತಿಳಿಸುವಲ್ಲಿ ಪ್ರಯತ್ನ ಮಾಡಿದ್ದೇನೆ.
ReplyDelete