Friday, 11 April 2014

ನೀ ಇಲ್ಲದೆ

ನೀ ಇಲ್ಲದೆ ಈ ಪ್ರಾಣ ಉಳಿಯದು 
ಈ ಪ್ರಾಣಕ್ಕೆ ನಿನ್ನ ಪ್ರಾಣ ಬೇಕು 
ನಿನ್ನ ನೆನಪುಗಳೆ  ಹಗಳಿರುಳು ಮನದೊಳಗು
ಈ ಹೃದಯಕ್ಕೆ ನಿನ್ನ ಹೃದಯ ಬೇಕು || ಪಲ್ಲವಿ ||

ಹಾ ಹೂ ಅನ್ನದೆ ಒಪ್ಪಿಕೋ ಅಪ್ಪಿಕೋ
ಶಿವ ಪಾರ್ವತಿ ಅಕ್ಷತೆ ಹಾಕುವರು
ಬಿಟ್ಟು ಬಿಡು ಈ ಕ್ಷಣ ನನ್ನ ಸೇರಿಕೋ
ಒಲಿದ ಪ್ರೀತಿಗೆ ಒಲವಾಗಿ ಬಾ ಬೆಳಕಾಗಿ ನೀ.

ಕಣ್ಣ ತೆರೆಸು ಬಾ ಕಣ್ಣಾಗಿರುವೆ
ಎದೆ ಗೂಡಲಿ ಬಚ್ಚಿಟ್ಟುಕೊಂಡು 
ಹೂವಾಗಿ ನೋಡಿಕೊಳ್ಳುವೆ
ಸ್ನೇಹದ ಸೆಳೆತಕ್ಕೆ ಪ್ರೀತಿಯ ಸೆಲೆಯಾಗು

No comments:

Post a Comment