Tuesday, 30 April 2013
ಏನೆ ಆಗಲಿ ಏನೆ ಹೋಗಲಿ
ಏನೆ ಆಗಲಿ ಏನೆ ಹೋಗಲಿ
ಬದುಕು ಸುಂದರವಾಗಿರಲಿ
ಕಠಿಣ ಬಾಳು ಸುಲಭ ಮಾಡಿ ಸುಖಿ ಆಗಿರಲಿ ಬಾಳು ಗೆಳತಿ
ಆ ಸುಖ ಜೀವನದಲ್ಲಿ ನಾನು ಬಾಳುವೆ ಗೆಳತಿ ||ಪಲ್ಲವಿ||
ಈ ನಿನ್ನ ಜಗದಲ್ಲಿ ಮರೆಯಾಗಿ ಹೋಗದಿರು
ನಿನಗೆ ನೀನು ಗೆಳತಿ
ಈ ನಿನ್ನ ಬದುಕಲ್ಲಿ ಕೋರಗಿ ಸೊರಗಿ ಹೋಗದಿರು
ನಿನಗೆ ನೀನು ಗೆಳತಿ
ತಂದೆ ತಾಯಿರ ಬಿಟ್ಟು
ರಕ್ತ ಸಂಬಂಧಿಕರ ಬಿಟ್ಟು
ಸ್ನೇಹ ಪ್ರೀತಿಯ ಬಿಟ್ಟು
ನೀ ಹೋಗದಿರು ಗೆಳತಿ ಎಲ್ಲರನ್ನ ಬಿಟ್ಟು.
ಬದುಕಿ ಬಾಳುವ ಜೀವ ನಿನ್ನದು
ಹಗಲು ರಾತ್ರಿಗಳ ಮಧ್ಯೆ ಜೀವನ ಎದುರಿಸಿ ನೀ ಬದುಕು
ನಿನಗಾಗಿ ನೀ ಮೊದಲು ಜೀವಿಸು ಗೆಳತಿ
ಸಾಯೋ ಮಾತು ನಿನ್ನಿಂದ ಎಂದು ಬಾರದಿರಲಿ ಗೆಳತಿ
ಸತ್ತು ಸಾಧಿಸುವುದಾದರೇನು ಇದ್ದು ಸಾಧಿಸಬೇಕು
ಸಾಧನೆಯೇ ಮನುಷ್ಯನ ನಿರಂತರ ಜೀವನ ದಿನನಿತ್ಯ ಸಾಗಬೇಕು
ಜೀವನ ತಿಳಿದುಕೋ ಗೆಳತಿ ಕಷ್ಟ ಸುಖಗಳ ನಡುವೆ
ಸಾವು ತಾನಾಗಿಯೇ ಬರಬೇಕು ನಾವು ತಂದುಕೊಳ್ಳಬಾರದು ಗೆಳತಿ.
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ
Subscribe to:
Post Comments (Atom)
No comments:
Post a Comment