Friday, 19 July 2013

ಜಾರಿದೆ ಮನಸ್ಸು ಮನಸ್ಸೊಳಗೆ

ಜಾರಿದೆ ಮನಸ್ಸು ಮನಸ್ಸೊಳಗೆ
ಹುಡುಕಿದೆ ಕನಸು ಕನಸೊಳಗೆ
ಬಯಸಿದೆ ನಿನ್ನ ಪ್ರೀತಿಯ ನಿನ್ನೊಳಗೆ
ಬೇಡಿದೆ ನನ್ನ ಪ್ರೀತಿಯ ನಿನ್ನ ಹೃದಯ ನನ್ನೊಳಗೆ ||ಪಲ್ಲವಿ||

ಸಾವಿರಾರು ಮಾತಿನ ಮೌನದಲ್ಲಿ
ಅರಳಿ ನಿಂತಿದೆ ಪ್ರೀತಿಯ ಸಾಗರ
ಏನಿರದ ನಿಶಬ್ಧದ ಅಲೆ ಅಲೆಯಲ್ಲಿ
ಸೃಷ್ಠಿಸಿದೆ ಸುಂದರ ಬದುಕಿನ ಚಿತ್ರಣ.

ಏಕಾಂತದಲ್ಲಿ ನಡೆಯುತ್ತಿದೆ ಮನಸ್ಸಿನ ಪಯಣ
ಆಗಸದಲ್ಲಿ ಬಣ್ಣ ಬಣ್ಣದ ವರ್ಣಮಯ ಪಯಣ
ಭೂಮಿಯಲ್ಲಿ ಸಾಗುತ್ತಿದೆ ಪ್ರೀತಿ ಪ್ರೇಮದ ಪಯಣ
ಈ ಹೃದಯಲ್ಲಿ ಅದೇ ತರ ಮಿಡಿತ ಅದೇ ತರ ಸಂಚಲನ

ಮೈಯಲ್ಲ ನವಿಲ ಗರಿಯ ಕಣ್ಣಾಗಿರಲು
ಹರುಷವೆಲ್ಲ ನಿನ್ನೊಡನೆ ಹಂಚಿಕೊಳ್ಳಲು
ಭಾವನೆಗಳೆಲ್ಲ ನಿನ್ನೊಡನೆ ಸಂಮಿಲನವಾಗಲು
ನಾ ಸದಾ ನಿನ್ನೊಡನೆ ಇರುವೆ ಸದಾ ನಿನ್ನವನಾಗಿ.

Tuesday, 30 April 2013

ಏನೆ ಆಗಲಿ ಏನೆ ಹೋಗಲಿ

ಏನೆ ಆಗಲಿ ಏನೆ ಹೋಗಲಿ ಬದುಕು ಸುಂದರವಾಗಿರಲಿ ಕಠಿಣ ಬಾಳು ಸುಲಭ ಮಾಡಿ ಸುಖಿ ಆಗಿರಲಿ ಬಾಳು ಗೆಳತಿ ಆ ಸುಖ ಜೀವನದಲ್ಲಿ ನಾನು ಬಾಳುವೆ ಗೆಳತಿ ||ಪಲ್ಲವಿ|| ಈ ನಿನ್ನ ಜಗದಲ್ಲಿ ಮರೆಯಾಗಿ ಹೋಗದಿರು ನಿನಗೆ ನೀನು ಗೆಳತಿ ಈ ನಿನ್ನ ಬದುಕಲ್ಲಿ ಕೋರಗಿ ಸೊರಗಿ ಹೋಗದಿರು ನಿನಗೆ ನೀನು ಗೆಳತಿ ತಂದೆ ತಾಯಿರ ಬಿಟ್ಟು ರಕ್ತ ಸಂಬಂಧಿಕರ ಬಿಟ್ಟು ಸ್ನೇಹ ಪ್ರೀತಿಯ ಬಿಟ್ಟು ನೀ ಹೋಗದಿರು ಗೆಳತಿ ಎಲ್ಲರನ್ನ ಬಿಟ್ಟು. ಬದುಕಿ ಬಾಳುವ ಜೀವ ನಿನ್ನದು ಹಗಲು ರಾತ್ರಿಗಳ ಮಧ್ಯೆ ಜೀವನ ಎದುರಿಸಿ ನೀ ಬದುಕು ನಿನಗಾಗಿ ನೀ ಮೊದಲು ಜೀವಿಸು ಗೆಳತಿ ಸಾಯೋ ಮಾತು ನಿನ್ನಿಂದ ಎಂದು ಬಾರದಿರಲಿ ಗೆಳತಿ ಸತ್ತು ಸಾಧಿಸುವುದಾದರೇನು ಇದ್ದು ಸಾಧಿಸಬೇಕು ಸಾಧನೆಯೇ ಮನುಷ್ಯನ ನಿರಂತರ ಜೀವನ ದಿನನಿತ್ಯ ಸಾಗಬೇಕು ಜೀವನ ತಿಳಿದುಕೋ ಗೆಳತಿ ಕಷ್ಟ ಸುಖಗಳ ನಡುವೆ ಸಾವು ತಾನಾಗಿಯೇ ಬರಬೇಕು ನಾವು ತಂದುಕೊಳ್ಳಬಾರದು ಗೆಳತಿ. - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

Wednesday, 24 April 2013

ನನ್ನ ಚಿಂತೆಯ ನೀ ಮಾಡದಿರು

ನನ್ನ ಚಿಂತೆಯ ನೀ ಮಾಡದಿರು
ಮಾಡುವುದಾರೇ ಇಂದೆ ಮಾಡು
ಮರುದಿನವು ನನ್ನ ಚಿಂತೆಯ ಮಾಡದಿರು
ನೀ ಮರುದಿನವೆ ಪರರ ಮಡದಿಯಾಗುವಳು. ||ಪಲ್ಲವಿ||

ಅತ್ತು ಕರೆದರು ಸಿಗುವುದಿಲ್ಲ
ಸಿಗುವುದೊಂದೆ ವ್ಯಥೆ ಕಥೆ, ನೀ ಗೋಳಾಡಬೇಡ
ಈ ಸಮಾಜವೆ ಹೀಗೆಯೆಲ್ಲ
ನಮ್ಮನ್ನು ಕೂಡಿಬಾಳಲು ಬಿಡುವುದಿಲ್ಲ.

ಎದೆಗೆ ಪ್ರೀತಿಯ ತುಂಬಿದವಳು
ಹೃದಯದಲ್ಲಿಯೇ ಉಳಿದವಳು
ಜೀವನ ಹಂಚಿಕೊಳ್ಳಲು ಬರದೆ ಹೋಗುವಳು
ಗೆಳತಿ ನೀನಿಲ್ಲದೆ ಕನಸ್ಸುಗಳೆ ಬತ್ತಿ ಹೋಗುತ್ತಿರುವವು.

ಜಾತಿ ಮತಗಳ ಮತ್ಸರಗಳಲ್ಲಿ ಪ್ರೀತಿಯ ಕಗ್ಗೋಲೆ
ದ್ವೇಷ ಅಸುಹೆಗಳಲ್ಲಿ ಪ್ರೀತಿಯ ಮರಣ ಹೋಮ
ಬಡವ ಸಿರಿವಂತರ ಜಂಜಾಟದಲ್ಲಿ ಪ್ರೀತಿಯ ಬಹಿಸ್ಕಾರ
ಈ ಜಗದ ಜನರೆಲ್ಲರು ಹೀಗೆ ಗೆಳತಿ ನೀ ನನ್ನ ದುಃಖ ಮಾಡದಿರು.

                                                              - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

Thursday, 28 March 2013

ಜೀವವ ಕೊಲ್ಲದಿರಿ

ಜೀವವ ಕೊಲ್ಲದಿರಿ
ಜೀವಂತ ಇದ್ದಾಗಲೇ
ಜೀವಬೇಕಾದರು ಕೊಡುವೆ
ನಂಬಿಕೆಗೆ ದ್ರೋಹ ಮಾಡದಿರಿ || ಪಲ್ಲವಿ||

ಸಂಬಂಧಗಳ ನಂಬಿಕೆಗಳೇ ಜೀವಂತ
ಜೀವಂತ ಜೀವವ ನಂಬಿ ನಡೆಯಿರಿ
ಮೋಸ ವಂಚನೆಗಳಿಗೆ ಮಾರಿ ಹೋಗಿ
ಬೆನ್ನಹಿಂದೆ ಚೂರಿ ಹಾಕಬೇಡಿರಿ.

ಕಪಟ ನಾಟಕ ನಮಗೇತಕೆ
ನಾಟಕಕ್ಕೆ ಮಾತ್ರ ಸೀಮಿತವಾಗಿರಲಿ
ಬದುಕಿನಲ್ಲಿ ಬದುಕಿ ಬಾಳಿರಿ
ಮನುಷ್ಯ ಜೀವ ಕುಲದೊಂದಿಗೆ ಒಳಿತಾಗಿ ಬಾಳಿರಿ

ಪ್ರಾಣಕ್ಕೆ ಪ್ರಾಣವ ಕೊಡಿರಿ
ಎಲ್ಲಾ ಜೀವಿಗಳಿಗೂ ಆಶ್ರಯ ಕೊಡಿರಿ
ಜೀವವ ಕೊಲ್ಲುವ ಅಧಿಕಾರ ನಿಮಗಿಲ್ಲ
ಬದಲಿ ಜೀವವ ಸಂರಕ್ಷಿಸುವ ಹೊಣೆ ನಿಮ್ಮದಿದೆ.

                                                              - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

Saturday, 16 March 2013

ನಿನ್ನದೆ

ತನುವು ನಿನ್ನದೆ
ಮನವು ನಿನ್ನದೆ
ನಾನು ನಿನ್ನವನೆ
ನನ್ನ ಹೃದಯವು ನಿನ್ನದೆ ||ಪಲ್ಲವಿ||

ನನ್ನ ಪ್ರೀತಿಯು ನಿನ್ನದೆ
ನನ್ನ ಸ್ನೇಹವು ನಿನ್ನದೆ
ನನ್ನ ಉಸಿರಾಟವು ನಿನ್ನದೆ
ನನ್ನ ಬದುಕು ನಿನ್ನದೆ.

ನನ್ನ ಒಲವು ನಿನ್ನದೆ
ನನ್ನ ನಲಿವು ನಿನ್ನದೆ
ನನ್ನ ದುಃಖವು ನಿನ್ನದೆ
ನನ್ನ ಮೌನವು ನಿನ್ನದೆ.

ನನ್ನ ಕನಸ್ಸು ನಿನ್ನದೆ
ನನ್ನ ಮನಸ್ಸು ನಿನ್ನದೆ
ನನ್ನ ಆಸೆಯು ನಿನ್ನದೆ
ನನ್ನ ಸರ್ವಸ್ವವು ನಿನ್ನದೆ.

                                       ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
 

Friday, 15 March 2013

ಹಾರಿ ಬಿಡುವೆ ಹಕ್ಕಿಯಂತೆ

ಹಾರಿ ಬಿಡುವೆ ಹಕ್ಕಿಯಂತೆ ಮನಸ್ಸ ಬಾನಲ್ಲಿಯೂ
ಇಷ್ಟವಾದ ನಕ್ಷತ್ರವ ಕದ್ದು ನೋಡಲು ಎಲ್ಲೆಲ್ಲಿಯೂ
ಯಾವ ಹಳ್ಳಿದಾದರೇನು ನಕ್ಷತ್ರ ಮನಸ್ಸು ಚಿನ್ನದಂತಿದ್ದರೆ ಸಾಕು
ಯಾವ ರೂಪದಾದರೇನು ನಕ್ಷತ್ರ ಗುಣ ಅಪರಂಜಿಯಂತಿದ್ದರೆ ಸಾಕು ||ಪಲ್ಲವಿ||

ಸಾವಿರಾರು ಪುಟದಲ್ಲಿಯೂ ನಿನ್ನದೆ ಹೆಸರು ಪ್ರತಿ ಪುಟ ಪುಟದಲ್ಲಿಯೂ
ನೂರಾರು ಬಾಳಿನ ಹೆಜ್ಜೆಯ ಗುರುತ್ತಲ್ಲಿಯೂ ನಿನ್ನದೆ ಪ್ರತಿ ನೆನಪು ಪ್ರತಿ ಹೆಜ್ಜೆಯಲ್ಲಿಯೂ
ಕಾಣದೆಯಿರುವ ಕಣ್ಣಿಗೆ, ಮನದ ಕಣ್ಣಿಗೆ ಕಾಣುವ ಚಲುವೆಯ ಹುಡುಕುತ ನಾ ಹೋರಟೆ
ಬಾವನೆಯ ಬರವಸೆಯ ಸಾಗರವ ಹೊತ್ತು ಕನಸ್ಸಿನ ಮನಸ್ಸಿನ ದೇವತೆಯ ಹುಡುಕುತ ನಾ ಹೋರಟೆ.

ಓ ಜೀವವೆ ನೀ ಎಲ್ಲಿ ಅಡಗಿರುವೆ ನನ್ನ ಈ ಲೋಕದಲ್ಲಿ ಒಂಟಿಯಾಗಿ ಬಿಟ್ಟು
ಪ್ರತಿ ಕ್ಷಣದಲ್ಲಿಯು ಕಾಯುವೆ ನಿನ್ನ ಪ್ರೀತಿಗಾಗಿ ಈ ಲೋಕದಲ್ಲಿ ನಾ ಎಲ್ಲಾ ಬಿಟ್ಟು
ಒಂದೊಂದು ಸಲ ಒಂದೊಂದು ಕಲ್ಪನೆ ಹೊತ್ತು ಹಗಳಿರುಳು ಕಾಯುತ್ತಿರುವೆ ನಿನ್ನ ಜೋತೆಗೆ ನಾ ಸೇರಲು
ಯಾರಿಗೂ ಹೇಳದೆ ಕೇಳದೆ ಸುರುವಾಗಿದೆ ಈ ಪ್ರೀತಿ ನಿನ್ನ ಪ್ರೀತಿಯ ಪಡೆದು ನಿನ್ನ ಜೋತೆಗೆ ನಾ ಸೇರಲು.

                                                                                         -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.