Wednesday, 19 December 2012

ನೆನಪಿರಲಿ ನೆನಪಿನ ದೋಣಿಯಲ್ಲಿ

ನೆನಪಿರಲಿ ನೆನಪಿನ ದೋಣಿಯಲ್ಲಿ

ನೆನಪಿರಲಿ ನೆನಪಿನ ದೋಣಿಯಲ್ಲಿ
ನಮ್ಮ ಪ್ರೀತಿಯ ಪಯಣದ ದೋಣಿಯಲ್ಲಿ
ಅಬ್ಬರದ ಅಲೆ ಅಲೆಗಳನ್ನೆ ಎದುರಿಸಿ ಸಾಗೋಣ
ನಮ್ಮ ಪ್ರೀತಿಯ ಜಯಿಸಿ ಜಯ ಪಡೆಯೋಣ.


ಬಿರುಗಾಳಿಯೇ ಬಿಸಿದರೂ
ಅಲುಗದು ಹೆದರದು ನಮ್ಮಿ ಪ್ರೀತಿಯ  ಪಯಣ
ದಂಡು ಕೋರರ ದಂಡು ಬಂದರೂ
ಎದುರಿಸಿ ಮುನ್ನುಗ್ಗುವೆವು ನಮ್ಮಿ ಪ್ರೀತಿಯ ಪಯಣ.

ನಮ್ಮಿ ಪ್ರೀತಿಯ ಪಯಣದ ದೋಣಿಯಲ್ಲಿ
ನಾವೇ ನಾವೀಕರು ನಾವೇ ಪ್ರಯಾಣಿಕರು
ನೆನಪಿರಲಿ ನೆನಪಿನ ದೋಣಿಯಲ್ಲಿ
ಪ್ರೀತಿಯೇ ಗೆಲ್ಲುವುದು ಪ್ರೀತಿಯೇ ಉಳಿಯುವುದು .

ಸಾವು ಬಂದರೂ ಸಾಯುವುದಿಲ್ಲ ನಮ್ಮಿ ಪ್ರೀತಿ
ಸತ್ತು ಮೇಲು ಜೀವಂತ ಉಸಿರಾಡುವುದು ನಮ್ಮಿ ಪ್ರೀತಿ
ಇತಿಹಾಸದ ಪುಟ ಪುಟದಲ್ಲಿಯೂ ಚಿರಾಯು ನಮ್ಮಿ ಪ್ರೀತಿ
ಸೂರ್ಯ ಚಂದ್ರರಿರೂವರೆಗೂ ಜೀವಂತ ನಮ್ಮಿ ಪ್ರೀತಿ .

                                                   -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

Saturday, 8 December 2012

ನನ್ನ ಪ್ರೀತಿಯ ಹೃದಯ

ನನ್ನ ಪ್ರೀತಿಯ ಹೃದಯ
 
ನನ್ನ ಪ್ರೀತಿಯ ಹೃದಯ ಹೂವಾಗಿ ಅರಳಲಿ
ನಗುವ ಹೂವಿನಂತೆ
ನನ್ನ ಪ್ರೀತಿಯ ಹೃದಯವು ಅಳುವ ಹೃದಯಗಳಿಗೆ
ಆಸರೆಯ ಮನೆಯಾಗಲಿ
 
ನನ್ನ ಪ್ರೀತಿಯ ಹೃದಯ ಪ್ರೀತಿ ಪ್ರೀತಿಯಿಂದಿರಲಿ
ದ್ವೇಷದಿಂದಲ್ಲ
ನನ್ನ ಪ್ರೀತಿಯ ಹೃದಯದ ಕನಸ್ಸು ನನಸ್ಸಾಗಿ ಇಡೇರಲಿ
ದುರಾಷೆಯಿಂದೆಲ್ಲ
 
ನನ್ನ ಪ್ರೀತಿಯ ಹೃದಯ ಮನೆಯ ಕಟ್ಟಿ ಬೆಳಸಲಿ
ಮನದ ಮನಸ್ಸಿನಿಂದ
ನನ್ನ ಪ್ರೀತಿಯ ಹೃದಯ ಒಡೆದ ಹೃದಯಗಳ ಒಂದು ಮಾಡಲಿ
ಹೃದಯ ಹೃದಯದಿಂದ
 
ನನ್ನ ಪ್ರೀತಿಯ ಹೃದಯ ಬಂಗಾರದ ಬದುಕ ಸಾಗಿಸಲಿ
ಹೃದಯ ಹೃದಯಗಳ ನಡುವೆ
ನನ್ನ ಪ್ರೀತಿಯ ಹೃದಯ ಹೂವಾಗಿ ಅರಳಲಿ
ಅರಳಿ ಅರಳಿಸಲಿ ಹೃದಯ ಹೃದಯಗಳ ನಡುವೆ
 
                                                             ಹೆಚ್. ವಿರುಪಾಕ್ಷಪ್ಪ ತಾವರಗೊಂದಿ.