Thursday, 28 March 2013

ಜೀವವ ಕೊಲ್ಲದಿರಿ

ಜೀವವ ಕೊಲ್ಲದಿರಿ
ಜೀವಂತ ಇದ್ದಾಗಲೇ
ಜೀವಬೇಕಾದರು ಕೊಡುವೆ
ನಂಬಿಕೆಗೆ ದ್ರೋಹ ಮಾಡದಿರಿ || ಪಲ್ಲವಿ||

ಸಂಬಂಧಗಳ ನಂಬಿಕೆಗಳೇ ಜೀವಂತ
ಜೀವಂತ ಜೀವವ ನಂಬಿ ನಡೆಯಿರಿ
ಮೋಸ ವಂಚನೆಗಳಿಗೆ ಮಾರಿ ಹೋಗಿ
ಬೆನ್ನಹಿಂದೆ ಚೂರಿ ಹಾಕಬೇಡಿರಿ.

ಕಪಟ ನಾಟಕ ನಮಗೇತಕೆ
ನಾಟಕಕ್ಕೆ ಮಾತ್ರ ಸೀಮಿತವಾಗಿರಲಿ
ಬದುಕಿನಲ್ಲಿ ಬದುಕಿ ಬಾಳಿರಿ
ಮನುಷ್ಯ ಜೀವ ಕುಲದೊಂದಿಗೆ ಒಳಿತಾಗಿ ಬಾಳಿರಿ

ಪ್ರಾಣಕ್ಕೆ ಪ್ರಾಣವ ಕೊಡಿರಿ
ಎಲ್ಲಾ ಜೀವಿಗಳಿಗೂ ಆಶ್ರಯ ಕೊಡಿರಿ
ಜೀವವ ಕೊಲ್ಲುವ ಅಧಿಕಾರ ನಿಮಗಿಲ್ಲ
ಬದಲಿ ಜೀವವ ಸಂರಕ್ಷಿಸುವ ಹೊಣೆ ನಿಮ್ಮದಿದೆ.

                                                              - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

Saturday, 16 March 2013

ನಿನ್ನದೆ

ತನುವು ನಿನ್ನದೆ
ಮನವು ನಿನ್ನದೆ
ನಾನು ನಿನ್ನವನೆ
ನನ್ನ ಹೃದಯವು ನಿನ್ನದೆ ||ಪಲ್ಲವಿ||

ನನ್ನ ಪ್ರೀತಿಯು ನಿನ್ನದೆ
ನನ್ನ ಸ್ನೇಹವು ನಿನ್ನದೆ
ನನ್ನ ಉಸಿರಾಟವು ನಿನ್ನದೆ
ನನ್ನ ಬದುಕು ನಿನ್ನದೆ.

ನನ್ನ ಒಲವು ನಿನ್ನದೆ
ನನ್ನ ನಲಿವು ನಿನ್ನದೆ
ನನ್ನ ದುಃಖವು ನಿನ್ನದೆ
ನನ್ನ ಮೌನವು ನಿನ್ನದೆ.

ನನ್ನ ಕನಸ್ಸು ನಿನ್ನದೆ
ನನ್ನ ಮನಸ್ಸು ನಿನ್ನದೆ
ನನ್ನ ಆಸೆಯು ನಿನ್ನದೆ
ನನ್ನ ಸರ್ವಸ್ವವು ನಿನ್ನದೆ.

                                       ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
 

Friday, 15 March 2013

ಹಾರಿ ಬಿಡುವೆ ಹಕ್ಕಿಯಂತೆ

ಹಾರಿ ಬಿಡುವೆ ಹಕ್ಕಿಯಂತೆ ಮನಸ್ಸ ಬಾನಲ್ಲಿಯೂ
ಇಷ್ಟವಾದ ನಕ್ಷತ್ರವ ಕದ್ದು ನೋಡಲು ಎಲ್ಲೆಲ್ಲಿಯೂ
ಯಾವ ಹಳ್ಳಿದಾದರೇನು ನಕ್ಷತ್ರ ಮನಸ್ಸು ಚಿನ್ನದಂತಿದ್ದರೆ ಸಾಕು
ಯಾವ ರೂಪದಾದರೇನು ನಕ್ಷತ್ರ ಗುಣ ಅಪರಂಜಿಯಂತಿದ್ದರೆ ಸಾಕು ||ಪಲ್ಲವಿ||

ಸಾವಿರಾರು ಪುಟದಲ್ಲಿಯೂ ನಿನ್ನದೆ ಹೆಸರು ಪ್ರತಿ ಪುಟ ಪುಟದಲ್ಲಿಯೂ
ನೂರಾರು ಬಾಳಿನ ಹೆಜ್ಜೆಯ ಗುರುತ್ತಲ್ಲಿಯೂ ನಿನ್ನದೆ ಪ್ರತಿ ನೆನಪು ಪ್ರತಿ ಹೆಜ್ಜೆಯಲ್ಲಿಯೂ
ಕಾಣದೆಯಿರುವ ಕಣ್ಣಿಗೆ, ಮನದ ಕಣ್ಣಿಗೆ ಕಾಣುವ ಚಲುವೆಯ ಹುಡುಕುತ ನಾ ಹೋರಟೆ
ಬಾವನೆಯ ಬರವಸೆಯ ಸಾಗರವ ಹೊತ್ತು ಕನಸ್ಸಿನ ಮನಸ್ಸಿನ ದೇವತೆಯ ಹುಡುಕುತ ನಾ ಹೋರಟೆ.

ಓ ಜೀವವೆ ನೀ ಎಲ್ಲಿ ಅಡಗಿರುವೆ ನನ್ನ ಈ ಲೋಕದಲ್ಲಿ ಒಂಟಿಯಾಗಿ ಬಿಟ್ಟು
ಪ್ರತಿ ಕ್ಷಣದಲ್ಲಿಯು ಕಾಯುವೆ ನಿನ್ನ ಪ್ರೀತಿಗಾಗಿ ಈ ಲೋಕದಲ್ಲಿ ನಾ ಎಲ್ಲಾ ಬಿಟ್ಟು
ಒಂದೊಂದು ಸಲ ಒಂದೊಂದು ಕಲ್ಪನೆ ಹೊತ್ತು ಹಗಳಿರುಳು ಕಾಯುತ್ತಿರುವೆ ನಿನ್ನ ಜೋತೆಗೆ ನಾ ಸೇರಲು
ಯಾರಿಗೂ ಹೇಳದೆ ಕೇಳದೆ ಸುರುವಾಗಿದೆ ಈ ಪ್ರೀತಿ ನಿನ್ನ ಪ್ರೀತಿಯ ಪಡೆದು ನಿನ್ನ ಜೋತೆಗೆ ನಾ ಸೇರಲು.

                                                                                         -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.